Overview
Chamundi Hill, Taluk: Mysuru, District: Mysuru
Chamundi Hill, located 3 km southeast of Mysore Palace, rises to a height of 1,074 meters above sea level. When viewed from the Palace to the west, the hill is said to resemble the reclining demon Mahishasura, adding a mythical charm to its grandeur. Atop the hill lies the ancient Chamundeshwari Temple, originally known as Mahabala or Mahabaleshwara, which dates back to the Ganga dynasty. During the Hoysala era, additions such as a pillared mantapa and a gateway enriched the temple’s structure. The idol of Goddess Chamundeshwari in the sanctum is believed to have been created during this period. Chamundi, a fierce form of Parvati (Kali), became the royal family deity of Mysore in the 16th century.
In the early 19th century, Krishnaraja Wodeyar III undertook significant renovations, including the construction of the iconic gateway tower (Gopura), which can be seen from miles away. Statues of the king and his queens grace the temple premises, preserving the legacy of the Wodeyar dynasty.A paved road, inaugurated in 1916, made the hilltop temple more accessible to devotees. Near the temple stands a striking 3.5-meter-tall statue of Mahishasura, depicted holding a serpent in one hand and a sword in the other, a constant reminder of the legend tied to the goddess’s victory over the demon.
ಚಾಮುಂಡಿ ಬೆಟ್ಟ, ತಾಲ್ಲೂಕು: ಮೈಸೂರು, ಜಿಲ್ಲೆ: ಮೈಸೂರು
ಮೈಸೂರು ಅರಮನೆಯಿಂದ ಆಗ್ನೇಯಕ್ಕೆ 3 ಕಿ.ಮೀ ದೂರದಲ್ಲಿರುವ ಚಾಮುಂಡಿಬೆಟ್ಟವು ಸಮುದ್ರ ಮಟ್ಟದಿಂದ 1,074 ಮೀಟರ್ ಎತ್ತರದಲ್ಲಿ ಪ್ರಾಚೀನ ಚಾಮುಂಡೇಶ್ವರಿ ದೇವಾಲಯವಿದೆ. ಅರಮನೆಯಿಂದ ಪಶ್ಚಿಮಕ್ಕೆ ನೋಡಿದಾಗ ಬೆಟ್ಟವು ಒರಗಿರುವ ಮಹಿಷಾಸುರನನ್ನು ಹೋಲುತ್ತದೆ ಎಂದು ಹೇಳಲಾಗುತ್ತದೆ. ಇದು ಅದರ ಪೌರಾಣಿಕ ಭವ್ಯತೆಗೆ ಮತ್ತಷ್ಟು ವೈಭವವನ್ನು ತಂದುಕೊಟ್ಟಿದೆ. ಗಂಗರಾಜವಂಶದ ಕಾಲದಿಂದಲೂ ಇರುವ ಇದನ್ನು ಮೂಲತಃ ಮಹಾಬಲ ಅಥವಾ ಮಹಾಬಲೇಶ್ವರ ಎಂದು ಕರೆಯಲಾಗುತ್ತಿತ್ತು. ಹೊಯ್ಸಳರ ಕಾಲದಲ್ಲಿ, ಕಂಬಗಳ ಮಂಟಪ ಮತ್ತು ದ್ವಾರದಂತಹ ಸೇರ್ಪಡೆಗಳು ದೇವಾಲಯದ ಕಟ್ಟಡವನ್ನು ಮತ್ತಷ್ಟು ಶ್ರೀಮಂತಗೊಳಿಸಿದ್ದು, ಗರ್ಭಗುಡಿಯಲ್ಲಿರುವ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಈ ಅವಧಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಎಂದು ನಂಬಲಾಗಿದೆ. ಪಾರ್ವತಿ (ಕಾಳಿ) ದೇವಿಯ ಉಗ್ರರೂಪವಾದ ಚಾಮುಂಡಿ 16ನೇ ಶತಮಾನದಿಂದ ಮೈಸೂರಿನ ರಾಜಮನೆತನದ ದೇವತೆ ಎಂದು ಪರಿಗಣಿಸಲಾಗಿದೆ. 19ನೇ ಶತಮಾನದ ಆರಂಭದಲ್ಲಿ ಕೃಷ್ಣರಾಜ ಒಡೆಯರ್ III ಗಮನಾರ್ಹ ನವೀಕರಣ ಕಾರ್ಯಗಳನ್ನು ಕೈಗೊಂಡಿದ್ದು, ಅದರಲ್ಲಿ ಮೈಲುಗಳಷ್ಟು ದೂರದಿಂದ ಕಾಣಬಹುದಾದ ಐತಿಹಾಸಿಕ ಹೆಬ್ಬಾಗಿಲು ಗೋಪುರದ (ಗೋಪುರ) ನಿರ್ಮಾಣವೂ ಸಹ ಒಂದಾಗಿದೆ. ಒಡೆಯರ್ ರವರ ರಾಜವಂಶದ ಪರಂಪರೆಯನ್ನು ಸಂರಕ್ಷಿಸಲು ರಾಜ ಮತ್ತು ರಾಣಿಯರ ಪ್ರತಿಮೆಗಳು ದೇವಾಲಯದ ಆವರಣದ ಸುತ್ತ ಅಲಂಕರಿಸಲ್ಪಟ್ಟಿವೆ. 1916ರಲ್ಲಿ ಉದ್ಘಾಟಿಸಲಾದ ಸುಸಜ್ಜಿತ ರಸ್ತೆಯು ಬೆಟ್ಟದ ತುದಿಯಲ್ಲಿರುವ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡುವಂತೆ ಮಾಡಿತು. ದೇವಾಲಯದ ಬಳಿ 3.5 ಮೀಟರ್ ಎತ್ತರದ ಮಹಿಷಾಸುರನ ಪ್ರತಿಮೆ ಇದ್ದು, ಒಂದು ಕೈಯಲ್ಲಿ ಸರ್ಪ ಮತ್ತು ಇನ್ನೊಂದು ಕೈಯಲ್ಲಿ ಕತ್ತಿಯನ್ನು ಹಿಡಿದಿರುವುದನ್ನು ನಿರ್ಮಿಸಲಾಗಿದೆ. ಇದು ಮಹಿಷಾಸುರನ ಮೇಲೆ ದೇವತೆಯ ವಿಜಯಕ್ಕೆ ಸಂಬಂಧಿಸಿದ ದಂತ ಕಥೆಯ ಶಾಶ್ವತ ಕುರುಹು ಆಗಿದೆ.
Trip Highlights
- Temple Visits: Engage in prayers and observe religious ceremonies.
- Trekking: Climb the stairway to experience the serene environment and enjoy physical activity.
- Panoramic Photography: Capture stunning views of Mysore from the hilltop.
- Cultural Exploration: Learn about the temple's architectural and historical significance.
- Chamundeshwari Temple: The main temple dedicated to Goddess Chamundi.
- Nandi Statue: A massive granite statue of Nandi, the bull, facing the temple.
- Panoramic Viewpoint: Offering breathtaking views of Mysore city and its surroundings.
- Mahishasura Statue: Depicting the demon king defeated by Goddess Chamundi.