Mysurutourism

Sri Chamarajendra Zoological Gardens

  • Home
  • Trips
  • Sri Chamarajendra Zoological Gardens

Sri Chamarajendra Zoological Gardens

Overview

Sri Chamarajendra Zoological Garden, District: Mysuru

Sri Chamarajendra Zoological Gardens, commonly known as ‘Mysore Zoo,’ is one of the oldest zoos in India. It was established in 1892 by the erstwhile Maharajah of Mysore, Sri Chamarajendra Wadiyar. The zoo is renowned for its thoughtful planning, exceptional cleanliness, successful conservation breeding of endangered species, and its efforts to recreate natural habitats for its diverse collection of exotic animals from around the world. The Sri Chamarajendra Zoological Gardens is spread over a wide area of 157.02 acres and includes the Karanji Lake within its perimeter. The zoo is home to a rich variety of flora and fauna. It houses over 1,450 animals from nearly 168 species, including mammals, birds, and reptiles. These animals hail from different corners of the globe, offering visitors a glimpse of global biodiversity. The Zoo is more than a tourist attraction; it plays a crucial role in wildlife conservation. It actively participates in breeding programs for endangered species, contributing to the global efforts to protect threatened wildlife. Additionally, the zoo conducts educational programs to raise awareness about the importance of wildlife conservation. Visitors to the zoo can marvel at a diverse range of species, from African lions, giraffes, and zebras to Indian elephants, Bengal tigers, and sloth bears. Rare and exotic species, such as the white tiger, orangutans, and the Great Indian Hornbill, add to the zoo’s appeal.To enhance the visitor experience, the zoo offers battery-operated vehicle rides that allow guests to explore the park comfortably. These rides are especially helpful for the elderly and differently-abled visitors. (On payment basis)

.

ಶ್ರೀ ಚಾಮರಾಜೇಂದ್ರ ಮೃಗಾಲಯ, ಜಿಲ್ಲೆ: ಮೈಸೂರು

ಶ್ರೀ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್ಸ್ ಅನ್ನು ಸಾಮಾನ್ಯವಾಗಿ ‘ಮೈಸೂರು ಮೃಗಾಲಯ’ ಎಂದು ಕರೆಯಲಾಗುತ್ತದೆ. ಇದು ಭಾರತದ ಅತ್ಯಂತ ಹಳೆಯ ಮೃಗಾಲಯಗಳಲ್ಲಿ ಒಂದಾಗಿದೆ. ಇದನ್ನು ಮೈಸೂರಿನ ಹಿಂದಿನ ಮಹಾರಾಜರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು 1892ರಲ್ಲಿ ಸ್ಥಾಪಿಸಿದರು. ಮೃಗಾಲಯವು ಅದರ ಚಿಂತನಶೀಲ ಯೋಜನೆ, ಅಸಾಧಾರಣ ಶುಚಿತ್ವ, ಅಳಿವಿನಂಚಿನಲ್ಲಿರುವ ಪ್ರಭೇದಗಳ ಯಶಸ್ವಿ ಸಂರಕ್ಷಣೆ, ಸಂತಾನೋತ್ಪತ್ತಿ ಮತ್ತು ಜಗತ್ತಿನಾದ್ಯಂತ ಇರುವ ವಿವಿಧ ಪ್ರಾಣಿಗಳ ವೈವಿಧ್ಯಮಯ ಸಂಗ್ರಹಕ್ಕಾಗಿ ನೈಸರ್ಗಿಕ ವಸತಿಗಳನ್ನು ಮರು ಸೃಷ್ಟಿಸುವ ಪ್ರಯತ್ನಗಳಿಗೆ ಹೆಸರುವಾಸಿಯಾಗಿದೆ. ಶ್ರೀ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್ಸ್ ಒಟ್ಟು 157.02 ಎಕರೆ ವಿಶಾಲ ಪ್ರದೇಶದಲ್ಲಿ ವ್ಯಾಪಿಸಿ, ಇದರ ಪರಿಧಿಯಲ್ಲಿ ಕಾರಂಜಿ ಕೆರೆಯನ್ನು ಸಹ ಒಳಗೊಂಡಿದೆ. ಮೃಗಾಲಯವು ಶ್ರೀಮಂತ ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿ ಸಂಪತ್ತಿನ ನೆಲೆಯಾಗಿದೆ. ಇದು ಸಸ್ತನಿಗಳು, ಪಕ್ಷಿಗಳು ಮತ್ತು ಸರೀಸೃಪಗಳು ಸೇರಿದಂತೆ ಸುಮಾರು 168 ಜಾತಿಗಳ 1,450 ಕ್ಕೂ ಅಧಿಕ ಪ್ರಾಣಿಗಳನ್ನು ಹೊಂದಿದೆ. ಪ್ರಪಂಚದ ವಿವಿಧ ಮೂಲೆಗಳಿಂದ ಬಂದಿರುವ ಪ್ರಾಣಿಗಳು ಪ್ರವಾಸಿಗರಿಗೆ ಜಾಗತಿಕ ಜೀವವೈವಿಧ್ಯದ ಒಂದು ಸ್ಥೂಲ ನೋಟವನ್ನು ನೀಡುತ್ತದೆ.

ಮೃಗಾಲಯವು ಪ್ರವಾಸಿಗರ ಆಕರ್ಷಣೆಗಿಂತ ಹೆಚ್ಚಾಗಿ ಇದು ವನ್ಯಜೀವಿ ಸಂರಕ್ಷಣೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇದು ಅಳಿವಿನಂಚಿನಲ್ಲಿರುವ ಜೀವಿಗಳ ಸಂತಾನೋತ್ಪತ್ತಿ ಕಾರ್ಯಕ್ರಮಗಳ ಸಕ್ರಿಯ ಭಾಗವಾಗಿದೆ ಹಾಗೂ ವನ್ಯಜೀವಿಗಳನ್ನು ರಕ್ಷಿಸುವ ಜಾಗತಿಕ ಪ್ರಯತ್ನಗಳಿಗೆ ಕೊಡುಗೆ ನೀಡಿದೆ. ಹೆಚ್ಚುವರಿಯಾಗಿ ಮೃಗಾಲಯವು ವನ್ಯಜೀವಿ ಸಂರಕ್ಷಣೆಯ ಮಹತ್ವದ ಬಗ್ಗೆ ಅರಿವು ಮೂಡಿಸಲು ಹಲವು ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಮೃಗಾಲಯಕ್ಕೆ ಭೇಟಿ ನೀಡುವವರು ಆಫ್ರಿಕನ್ ಸಿಂಹಗಳು, ಜಿರಾಫೆಗಳು ಮತ್ತು ಜೀಬ್ರಾಗಳಿಂದ ಹಿಡಿದು ಭಾರತೀಯ ಆನೆಗಳು, ಬಂಗಾಳ ಹುಲಿಗಳು ಮತ್ತು ಕರಡಿಗಳಂತಹ ವೈವಿಧ್ಯಮಯ ಜಾತಿಗಳನ್ನು ನೋಡಿ ಆಶ್ಚರ್ಯಪಡಬಹುದು. ಬಿಳಿ ಹುಲಿ, ಒರಾಂಗುಟಾನ್‌ಗಳು ಮತ್ತು ಗ್ರೇಟ್ ಇಂಡಿಯನ್ ಹಾರ್ನ್‌ಬಿಲ್‌ನಂತಹ ಅಪರೂಪದ ಮತ್ತು ವಿಶೇಷ ತಳಿಗಳ ಪ್ರಾಣಿಗಳು ಮೃಗಾಲಯದ ಆಕರ್ಷಣೆಯನ್ನು ಹೆಚ್ಚಿಸಿವೆ. ಮೃಗಾಲಯಕ್ಕೆ ಭೇಟಿ ನೀಡುವವರಿಗೆ ಉತ್ತಮ ಅನುಭವವನ್ನು ಒದಗಿಸಲು ಮೃಗಾಲಯವು ಬ್ಯಾಟರಿ ಚಾಲಿತ ವಾಹನ ಸವಾರಿಗೆ ವ್ಯವಸ್ಥೆಗಳನ್ನು ಕಲ್ಪಿಸಿದೆ. ಇದು ಪ್ರವಾಸಿಗರು/ಅತಿಥಿಗಳು ಉದ್ಯಾನವನವನ್ನು ಆರಾಮವಾಗಿ ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಹಣ ಪಾವತಿ ಆಧಾರದ ಮೇಲೆ ಈ ಸವಾರಿಗಳು ವಿಶೇಷವಾಗಿ ವಯಸ್ಸಾದವರಿಗೆ ಮತ್ತು ವಿಶೇಷಚೇತನರಿಗೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಿವೆ.

Trip Highlights

  • Animal Enclosures: Home to a variety of species including lions, tigers, elephants, and more.
  • Karanji Lake: Adjacent to the zoo, offering boating facilities and birdwatching opportunities.
  • Butterfly Park: Showcasing a vibrant collection of butterfly species.

FAQs

What are the zoo's operating hours?

The zoo is open from 8:30 AM to 5:30 PM.

Is there an entry fee?

Yes, there is an entry fee for adults and children.

Are guided tours available?

Yes, guided tours can be arranged for groups upon request.

What types of animals can be seen in the zoo?

The zoo houses a variety of species, including mammals, birds, reptiles, and more.

Is there a place to eat within the zoo?

Yes, there are food stalls and refreshment areas inside the zoo.

Mysore Zoo

Trip Info