Mysurutourism

Devaraja Market

Devaraja Market

Overview

Devaraja Market, District: Mysuru

Devaraja Market has deep historical significance and continues to thrive to this day. Built in, 1886, it initially operated as a weekly market but is now open daily. Recognised as one of the oldest markets in Mysuru, it was constructed over the Diwan Poornayya Canal, which supplied drinking water to the Mysore Palace. In 1925, it was renamed as ‘Dodda Marukatte’ (Big Market) by Dodda Devaraja Wodeyar. Initially a small bazaar, it grew under the patronage of the royals and the city’s thriving trade culture. By the early 20th century, it was formally established and named after Maharaja Dodda Devaraja Wodeyar. The market became an integral part of Mysore’s daily life, reflecting the city’s rich heritage through its traditional goods like spices, sandalwood, and flowers. Despite modernization, Devaraja Market remains a timeless symbol of Mysore’s cultural and economic legacy, attracting locals and tourists alike. The market’s architecture blends traditional and colonial influences. Its entrance features a grand clock tower, which not only serves as a timekeeper but also symbolizes the market’s historical importance. Inside, the corridors spread out like a maze, lined with attractive stalls offering a variety of goods. The market boasts vibrant colours, decorative pillars, and high ceilings, enhancing its architectural appeal.

ದೇವರಾಜ ಮಾರುಕಟ್ಟೆ, ಜಿಲ್ಲೆ: ಮೈಸೂರು

1886 ರಲ್ಲಿ ನಿರ್ಮಿಸಲಾದ ದೇವರಾಜ ಮಾರುಕಟ್ಟೆಯು ಆಳವಾದ ಐತಿಹಾಸಿಕ ಮಹತ್ವವನ್ನು ಹೊಂದಿದ್ದು, 1925 ರಲ್ಲಿ ಇದನ್ನು ದೊಡ್ಡ ದೇವರಾಜ ಒಡೆಯರ್ ರವರು ‘ದೊಡ್ಡಮಾರುಕಟ್ಟೆ’ ಎಂದು ಮರು ನಾಮಕರಣ ಮಾಡಿದ್ದರು. ಇದು ಆರಂಭದಲ್ಲಿ ವಾರದ ಮಾರುಕಟ್ಟೆಯಾಗಿ ಕಾರ್ಯನಿರ್ವಹಿಸಿ, ಪ್ರಸ್ತುತ ದಿನದ ಮಾರುಕಟ್ಟೆಯಾಗಿ ಮುಂದುವರೆದಿದೆ. ಮೈಸೂರಿನ ಅತ್ಯಂತ ಹಳೆಯ ಮಾರುಕಟ್ಟೆಗಳಲ್ಲಿ ಒಂದೆಂದು ಗುರುತಿಸಲ್ಪಟ್ಟ ಇದನ್ನು ಮೈಸೂರು ಅರಮನೆಗೆ ಕುಡಿಯುವ ನೀರನ್ನು ಪೂರೈಸುವ ದಿವಾನ್ ಪೂರ್ಣಯ್ಯ ಕಾಲುವೆಯ ಮೇಲೆ ನಿರ್ಮಿಸಲಾಗಿದೆ. ಆರಂಭದಲ್ಲಿ ಇದು ರಾಜಮನೆತನದ ಆಶ್ರಯ ಮತ್ತು ನಗರದ ಬೆಳವಣಿಗೆ ಹೊಂದುತ್ತಿರುವಂತೆಯೇ ವ್ಯಾಪಾರ ಸಂಸ್ಕೃತಿಯಡಿಯಲ್ಲಿ ಬೃಹದಾಕಾರವಾಗಿ ಬೆಳೆಯಿತು. 20ನೇ ಶತಮಾನದ ಆರಂಭದ ವೇಳೆಗೆ ಇದನ್ನು ಔಪಚಾರಿಕವಾಗಿ ಸ್ಥಾಪಿಸಲಾಯಿತು ಮತ್ತು ಮಹಾರಾಜ ದೊಡ್ಡ ದೇವರಾಜ ಒಡೆಯರ್ ರವರು ಹೆಸರನ್ನು ಇದಕ್ಕೆ ಇಡಲಾಯಿತು. ಈ ಮಾರುಕಟ್ಟೆಯು ಮೈಸೂರಿನ ದೈನಂದಿನ ಜೀವನದ ಅವಿಭಾಜ್ಯ ಅಂಗವಾಯಿತು. ಮಸಾಲೆಗಳು, ಹೂವುಗಳಂತಹ ಸಾಂಪ್ರದಾಯಿಕ ಪದಾರ್ಥಗಳ ಮೂಲಕ ನಗರದ ಶ್ರೀಮಂತ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಆಧುನೀಕರಣದ ಹೊರತಾಗಿಯೂ, ದೇವರಾಜ ಮಾರುಕಟ್ಟೆಯು ಮೈಸೂರಿನ ಸಾಂಸ್ಕೃತಿಕ ಮತ್ತು ಆರ್ಥಿಕ ಪರಂಪರೆಯ ಕಾಲಾತೀತ ಸಂಕೇತವಾಗಿ ಉಳಿದಿದೆ. ಸ್ಥಳೀಯರು ಮತ್ತು ಪ್ರವಾಸಿಗರನ್ನು ಸಮಾನವಾಗಿ ಆಕರ್ಷಿಸುತ್ತದೆ. ಮಾರುಕಟ್ಟೆಯ ವಾಸ್ತುಶಿಲ್ಪವು ಸಾಂಪ್ರದಾಯಿಕ ಮತ್ತು ವಸಾಹತುಶಾಹಿ ಪ್ರಭಾವಗಳನ್ನು ಮಿಶ್ರಣ ಒಳಗೊಂಡಿದೆ. ಇದರ ಪ್ರವೇಶದ್ವಾರವು ಭವ್ಯವಾದ ಗಡಿಯಾರ ಗೋಪುರವನ್ನು ಹೊಂದಿದೆ. ಇದು ಸಮಯಪಾಲಕನಾಗಿ ಕಾರ್ಯನಿರ್ವಹಿಸುವುದಲ್ಲದೆ ಮಾರುಕಟ್ಟೆಯ ಐತಿಹಾಸಿಕ ಮಹತ್ವವನ್ನು ಸಂಕೇತಿಸುತ್ತದೆ. ಒಳಗೆ ಕಾರಿಡಾರ್ಗಳು ಚಕ್ರವ್ಯೂಹದಂತೆ ಹರಡಿಕೊಂಡಿವೆ. ವಿವಿಧ ಸರಕುಗಳನ್ನು ನೀಡುವ ಆಕರ್ಷಕ ಮಳಿಗೆಗಳಿಂದ ಸಾಲಾಗಿ ನಿಂತಿವೆ. ಮಾರುಕಟ್ಟೆಯು ಆಕರ್ಷಕ ಬಣ್ಣಗಳು, ಅಲಂಕಾರಿಕ ಕಂಬಗಳು ಮತ್ತು ಎತ್ತರದ ಛಾವಣಿಗಳನ್ನು ಹೊಂದಿದೆ. ಇದು ಅದರ ವಾಸ್ತುಶಿಲ್ಪದ ಆಕರ್ಷಣೆಯನ್ನು ಹೆಚ್ಚಿಸಿದೆ.

Destination Map

Trip Info