Overview
Chikka Gadiyara (Dufferin Clock Tower), District: Mysuru
The Chikkagadiyara, or the Small Clock Tower, is a historical landmark right in the heart of the city. Standing near the bustling Devaraja Market, it holds immense significance as a reminder of Mysore’s rich and royal heritage and urban development under the Wodeyar dynasty. It was Built in the 19th century in honour of Lord Dufferin the then Viceroy of India, who had made an official visit to the Mysore Kingdom on the invitation of Maharaja Chamaraja Wodeyar. The clock tower which was named Dufferin Clock Tower in honour of the Viceroy, stands as an enduring symbol of the city’s planning and architectural elegance. This charming structure is smaller than its counterpart, the Doddagadiyara (Big Clock Tower), but is equally captivating. The Chikkagadiyara is designed in an Indo-Saracenic style, combining traditional Indian and European architectural elements. Its square base is adorned with intricate carvings, while the tower tapers gracefully upward, culminating in a dome that houses the clock. The four-faced clock is functional to this day, keeping time for Mysore’s residents and visitors. Surrounding the tower is a well-maintained garden, which enhances its aesthetic appeal and offers a serene spot amidst the city’s hustle and bustle. The Chikkagadiyara area is also a hub of activity, with vendors, shoppers, and tourists adding to its lively and colourful ambience. This clock tower is not just a timekeeper, it is a historical monument that reflects Mysore’s legacy of blending tradition with modernity. Whether you’re a history enthusiast or a casual visitor, the Chikkagadiyara opens a window into the cultural and architectural richness of Mysuru.
ಚಿಕ್ಕಗಡಿಯಾರ (ಡಫರಿನ್ ಕ್ಲಾಕ್ ಟವರ್), ಜಿಲ್ಲೆ: ಮೈಸೂರು.
ಚಿಕ್ಕಗಡಿಯಾರ ಅಥವಾ ಚಿಕ್ಕ ಗಡಿಯಾರ ಗೋಪುರವು ನಗರದ ಹೃದಯಭಾಗದಲ್ಲಿರುವ ಐತಿಹಾಸಿಕ ಹೆಗ್ಗುರುತಾಗಿದೆ. ಜನದಟ್ಟಣೆಯ ಗದ್ದಲದ ದೇವರಾಜ ಮಾರುಕಟ್ಟೆಯ ಬಳಿ ನಿರ್ಮಿಸಿರುವ ಇದು ಮೈಸೂರಿನ ಶ್ರೀಮಂತ ಮತ್ತು ರಾಜಮನೆತನದ ಪರಂಪರೆ ಮತ್ತು ನಗರದ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಿದ್ದನ್ನು ತೋರಿಸುತ್ತದೆ. ಮಹಾರಾಜ ಚಾಮರಾಜ ಒಡೆಯರ್ ಅವರ ಆಹ್ವಾನದ ಮೇರೆಗೆ ಮೈಸೂರು ರಾಜ್ಯಕ್ಕೆ ಅಧಿಕೃತ ಭೇಟಿ ನೀಡಿದ ಅಂದಿನ ಭಾರತದ ವೈಸ್ ರಾಯ್ ಲಾರ್ಡ್ ಡಫರಿನ್ ಅವರ ಗೌರವಾರ್ಥವಾಗಿ ಇದನ್ನು 19ನೇ ಶತಮಾನದಲ್ಲಿ ನಿರ್ಮಿಸಲಾಯಿತು. ವೈಸರಾಯ್ ಗೌರವಾರ್ಥವಾಗಿ ಡಫರಿನ್ ಕ್ಲಾಕ್ ಟವರ್ ಎಂದು ಹೆಸರಿಸಲಾದ ಗಡಿಯಾರ ಗೋಪುರವು ನಗರದ ಯೋಜನೆ ಮತ್ತು ಸುಂದರ ವಾಸ್ತುಶಿಲ್ಪದ ಕಾಯಂ ಸಂಕೇತವಾಗಿದೆ. ಈ ಆಕರ್ಷಕ ಕಟ್ಟಡವು ಅದರ ಪ್ರತಿರೂಪವಾದ ದೊಡ್ಡಗಡಿಯಾರ (ದೊಡ್ಡ ಗಡಿಯಾರ ಗೋಪುರ) ಗಿಂತ ಚಿಕ್ಕದಾಗಿದ್ದರು ಅದರಷ್ಟೆ ಆಕರ್ಷಕವಾಗಿದೆ. ಚಿಕ್ಕಗಡಿಯಾರವನ್ನು ಇಂಡೋ-ಸಾರ್ಸೆನಿಕ್ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಸಾಂಪ್ರದಾಯಿಕ ಭಾರತೀಯ ಮತ್ತು ಯುರೋಪಿಯನ್ ವಾಸ್ತುಶಿಲ್ಪದ ಅಂಶಗಳನ್ನು ಸಂಯೋಜಿಸಲಾಗಿದೆ. ಇದರ ಚೌಕಾಕಾರದ ತಳಭಾಗವು ಸಂಕೀರ್ಣವಾದ ಕೆತ್ತನೆಗಳಿಂದ ಶೃಂಗರಿಸಲ್ಪಟ್ಟಿದ್ದು, ಗೋಪುರವು ಆಕರ್ಷಕವಾಗಿ ಮೇಲ್ಮುಖವಾಗಿದೆ. ಗಡಿಯಾರವನ್ನು ಹೊಂದಿರುವ ಗುಮ್ಮಟದಲ್ಲಿ ಸಮಾಗಮಗೊಳ್ಳುತ್ತದೆ.
ನಾಲ್ಕು ಮುಖಗಳ ಗಡಿಯಾರವು ಇಂದಿಗೂ ಕಾರ್ಯನಿರ್ವಹಿಸುತ್ತಿದೆ. ಇದು ಮೈಸೂರಿನ ನಿವಾಸಿಗಳು ಮತ್ತು ಪ್ರವಾಸಿಗರಿಗೆ ಸಮಯವನ್ನು ಒದಗಿಸುತ್ತದೆ. ಚಿಕ್ಕಗಡಿಯಾರ ಪ್ರದೇಶವು ಜನರ ಚಟುವಟಿಕೆಗಳ ಕೇಂದ್ರವಾಗಿದ್ದು, ಮಾರಾಟಗಾರರು, ವ್ಯಾಪಾರಿಗಳು ಮತ್ತು ಪ್ರವಾಸಿಗರು ಅದರ ಉತ್ಸಾಹಭರಿತ ಮತ್ತು ವರ್ಣರಂಜಿತ ವಾತಾವರಣಕ್ಕೆ ಜೀವಕಳೆ ತುಂಬುತ್ತಿದ್ದಾರೆ. ಈ ಗಡಿಯಾರ ಗೋಪುರ ಕೇವಲ ಸಮಯ ಪಾಲನೆಗಷ್ಟೇ ಅಲ್ಲದೇ ಒಂದು ಐತಿಹಾಸಿಕ ಸ್ಮಾರಕವಾಗಿದ್ದು, ಮೈಸೂರಿನ ಸಂಪ್ರದಾಯವನ್ನು ಆಧುನಿಕತೆಯೊಂದಿಗೆ ಬೆರೆಸುವ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಇದು ಇತಿಹಾಸದ ಉತ್ಸಾಹಿಗಳಿಗಾಗಲೀ ಅಥವಾ ಸಾಮಾನ್ಯ ವೀಕ್ಷಕರೇ ಆಗಿರಲಿ ಚಿಕ್ಕಗಡಿಯಾರವು ಮೈಸೂರಿನ ಸಾಂಸ್ಕೃತಿಕ ಮತ್ತು ವಾಸ್ತುಶಿಲ್ಪದ ಶ್ರೀಮಂತಿಕೆಯ ನೋಟವನ್ನು ಕಟ್ಟಿಕೊಡುತ್ತದೆ.