Overview
Prasanna Parvathi with Shri Gargeshwara Swamy Temple, Taluk:T. Narasipura, District: Mysuru
The Gargeshwari Temple in a village of the same name is a temple dedicated to Lord Shiva, who is worshipped here as Gargeshwara. The deity is represented by a naturally formed Spatika Linga, and it is believed that the Linga has the combined power of Shiva and his consort Parvati. Consequently, Lord Gargeshwara is worshipped as Ardhanareeshwara, symbolizing the union of Lord Shiva and Goddess Parvati, or Shiva and Shakti. There are many incredible facts and myths associated with the temple. One such belief is that the Shiva Linga in the sanctum sanctorum grows in size year on year. The temple is also renowned for its association with Lord Ganesha, who is said to play a unique role in determining whether devotees’ wishes will be fulfilled, adding to the temple’s mystique. There is a temple to Ganesha where the elephant-headed God is worshipped as Yantra Prashne Ganapathy or Yantrodharaka Maha Ganapathy. It is believed that this Ganesha idol was installed in the temple by Adi Shankaracharya. What is unique about this Ganesha idol is that devotees believe that the idol can tell them whether their wishes will come true or not. After making their wish and praying to Ganesha, a devotee will try to lift the Ganesha idol which weighs about 5 to 6 kilograms. If the devotee can do so, then it is a divine indication that their wish will be granted. If the devotee fails to lift the Ganesha idol, the indication is that their wish will not be granted. The Yantra Prashne Ganapathy is one of the main factors for the popularity of the temple, and the reason why devotees flock here to pray.
ಪ್ರಸನ್ನ ಪಾರ್ವತಿ ಸಮೇತ ಶ್ರೀ ಗರ್ಗೇಶ್ವರ ಸ್ವಾಮಿ ದೇವಾಲಯ, ತಾಲ್ಲೂಕು: ತಿ. ನರಸೀಪುರ, ಜಿಲ್ಲೆ: ಮೈಸೂರು
ಶ್ರೀ ಗರ್ಗೇಶ್ವರಿ ದೇವಸ್ಥಾನವು ಶಿವನಿಗೆ ಮೀಸಲಾಗಿದ್ದು, ಇಲ್ಲಿ ಗರ್ಗೇಶ್ವರ ಎಂದು ಪೂಜಿಸಲಾಗುತ್ತದೆ. ಇಲ್ಲಿ ಪಾರ್ವತಿ ದೇವಿಯ ಸಂಯೋಜಿತ ಶಕ್ತಿಯಿಂದ ತುಂಬಿದ ನೈಸರ್ಗಿಕವಾಗಿ ರೂಪುಗೊಂಡ ಸ್ಪಟಿಕ ಲಿಂಗದಿಂದ ನಿರ್ಮಿಸಲಾಗಿದೆ. ಇದರ ಪರಿಣಾಮ ಭಕ್ತರು ಭಗವಾನ್ ಗರ್ಗೇಶ್ವರನನ್ನು ಅರ್ಧನಾರೀಶ್ವರ ಎಂದು ಪೂಜಿಸುತ್ತಾರೆ. ಇದು ಶಿವ ಮತ್ತು ಪಾರ್ವತಿ ದೇವಿಯ ಜೊತೆಯಾಗಿರುವುದರ ಸಂಕೇತವಾಗಿದೆ. ಕುತೂಹಲಕರ ಅಂಶವೆಂದರೆ ಪ್ರತಿವರ್ಷ ಲಿಂಗವು ಗಾತ್ರದಲ್ಲಿ ಸ್ವಲ್ಪ ಬೆಳೆಯುತ್ತದೆಂದು ನಂಬಲಾಗಿದೆ. ಈ ದೇವಾಲಯವು ಗಣಪತಿಯೊಂದಿಗಿನ ತನ್ನ ಒಡನಾಟಕ್ಕೆ ಹೆಸರುವಾಸಿಯಾಗಿದೆ. ಇದು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವಲ್ಲಿ ವಿಶಿಷ್ಟ ಪಾತ್ರವನ್ನು ವಹಿಸುತ್ತದೆ ಎಂದು ಹೇಳಲಾಗುತ್ತದೆ. ಇದು ದೇವಾಲಯದ ನಿಗೂಢತೆಯನ್ನು ಹೆಚ್ಚಿಸುತ್ತದೆ. ಆನೆಯ ತಲೆಯ ದೇವರನ್ನು ಯಂತ್ರ ಪ್ರಶ್ನೆ ಗಣಪತಿ ಅಥವಾ ಯಂತ್ರೋಧಾರಕ ಮಹಾಗಣಪತಿ ಎಂದು ಪೂಜಿಸಲಾಗುತ್ತದೆ. ಈ ಗಣೇಶನ ವಿಗ್ರಹವನ್ನು ಆದಿ ಶಂಕರಾಚಾರ್ಯರು ಸ್ಥಾಪಿಸಿದ್ದಾರೆಂದು ನಂಬಲಾಗಿದೆ. ಈ ಗಣೇಶನ ವಿಗ್ರಹದ ವಿಶಿಷ್ಟತೆ ಏನೆಂದರೆ ಭಕ್ತರು ತಮ್ಮ ಇಷ್ಟಾರ್ಥಗಳು ಈಡೇರುತ್ತದೋ ಇಲ್ಲವೋ ಎಂಬುದನ್ನು ಈ ಮೂರ್ತಿ ಹೇಳಬಲ್ಲದು ಎಂದು ನಂಬುತ್ತಾರೆ. ತಮ್ಮ ಇಷ್ಟಾರ್ಥಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಗಣೇಶನನ್ನು ಪ್ರಾರ್ಥಿಸಿದ ನಂತರ ಭಕ್ತರೊಬ್ಬರು ಸುಮಾರು 5 ರಿಂದ 6 ಕಿಲೋ ಗ್ರಾಂಗಳಷ್ಟು ತೂಕದ ಗಣೇಶನ ಮೂರ್ತಿಯನ್ನು ಎತ್ತಲು ಪ್ರಯತ್ನಿಸುತ್ತಾರೆ. ಭಕ್ತನು ಕಲ್ಲನ್ನು ಸುಲಭವಾಗಿ ಎತ್ತಿದರೆ ಅದು ಅವರ ಬಯಕೆಯನ್ನು ಪೂರೈಸುತ್ತದೆ. ವಿಫಲರಾದರೆ ಅವರ ಆಸೆ ಈಡೇರವುದಿಲ್ಲ ಎಂಬ ದೈವಿಕ ಸೂಚನೆ ಎಂದು ನಂಬಲಾಗಿದೆ. ಯಂತ್ರ ಪ್ರಶ್ನೆ ಗಣಪತಿಯು ದೇವಾಲಯದ ಜನಪ್ರಿಯತೆಯ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.