Overview
Kabini Backwater, Taluk: H D Kote, District: Mysuru
The Kabini Backwaters is a serene haven that offers an enchanting blend of natural beauty and exciting wildlife. Located near the famous Kabini River, a major tributary of the Kavei, it borders the lush forests of the Nagarhole National Park. The Kabini backwaters are a perfect escape for nature enthusiasts and adventure seekers alike. What makes the Kabini Backwaters truly magical is the stillness of its waters, reflecting the surrounding greenery and the azure skies above. This picturesque spot is not only a visual delight but also a hotspot for wildlife sightings. Herds of elephants often gather near the water’s edge, creating an unforgettable spectacle, while the melodious chirping of exotic birds adds a symphony to the peaceful atmosphere. Kabini is a favourite wildlife destination and was once the favoured hunting ground for the royalty of Mysore, and the British. Today the Kabini Forest Reserve, spread over an area of 5,02,952 acres of green forest land is home to tigers, leopards, elephants, Indian Gaurs, Sloth bears, and other animals. Whether you’re looking to unwind amidst nature or embark on a thrilling safari, the Kabini Backwaters offers it all. A tranquil boat rides provide an intimate experience of the river’s serenity, and if you’re lucky, you might spot crocodiles sunbathing on the banks or even a tiger quenching its thirst. The surrounding landscape, with its rolling hills and verdant forests, is a photographer’s dream. As the sun sets over the Kabini Backwaters, the entire area transforms into a palette of warm hues, leaving visitors mesmerized.
ಕಬಿನಿ ಹಿನ್ನೀರು, ತಾಲ್ಲೂಕು: ಹೆಚ್.ಡಿ. ಕೋಟೆ, ಜಿಲ್ಲೆ: ಮೈಸೂರು
ಕಬಿನಿ ಹಿನ್ನೀರು ಪ್ರಶಾಂತವಾದ ಸ್ವರ್ಗವಾಗಿದ್ದು, ಇದು ನೈಸರ್ಗಿಕ ಸೌಂದರ್ಯ ಮತ್ತು ಅತ್ಯಾಕರ್ಷಕ ವನ್ಯಜೀವಿಗಳ ಮೋಡಿಮಾಡುವ ಸ್ಥಳವಾಗಿದೆ. ಕಾವೇರಿಯ ಪ್ರಮುಖ ಉಪನದಿಯಾದ ಪ್ರಸಿದ್ಧ ಕಬಿನಿ ನದಿಯ ಸಮೀಪದಲ್ಲಿದೆ. ಇದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಸಮೃದ್ಧ ಅರಣ್ಯ ಪ್ರದೇಶದವಾಗಿದೆ. ಕಬಿನಿ ಹಿನ್ನೀರಿನ ಪ್ರದೇಶವು ಪ್ರಕೃತಿ ಉತ್ಸಾಹಿಗಳಿಗೆ ಮತ್ತು ಸಾಹಸ ಪ್ರಿಯರಿಗೆ ಪರಿಪೂರ್ಣ ಸ್ಥಳವಾಗಿದೆ. ಈ ಮನೋಹರವಾದ ತಾಣವು ಕೇವಲ ದೃಶ್ಯಾನಂದ ಮಾತ್ರವಲ್ಲದೆ ವನ್ಯಜೀವಿಗಳ ವೀಕ್ಷಣೆಗೆ ನೆಚ್ಚಿನ ತಾಣವಾಗಿದೆ. ಆನೆಗಳ ಹಿಂಡುಗಳು ಆಗಾಗ್ಗೆ ನೀರಿನ ಅಂಚಿನಲ್ಲಿ ಬಂದು ಪ್ರವಾಸಿಗರಿಗೆ ವಿನೂತನ ಅನುಭವ ನೀಡುತ್ತದೆ. ಇದರೊಂದಿಗೆ ವಿಶೇಷ ಪಕ್ಷಿಗಳ ಮಧುರವಾದ ಚಿಲಿಪಿಲಿಯು ಶಾಂತಿಯುತ ವಾತಾವರಣಕ್ಕೆ ಹಿಮ್ಮೇಳವನ್ನು ಒದಗಿಸುತ್ತದೆ. ಕಬಿನಿಯು ಅಚ್ಚುಮೆಚ್ಚಿನ ವನ್ಯಜೀವಿ ತಾಣವಾಗಿದೆ ಮತ್ತು ಒಂದು ಕಾಲದಲ್ಲಿ ಮೈಸೂರಿನ ರಾಜಮನೆತನದವರಿಗೆ ಭೇಟೆಯಾಡುವ ನೆಚ್ಚಿನ ಸ್ಥಳವಾಗಿತ್ತು. ಕಬಿನಿ ಹಿನ್ನೀರಿನ ಅರಣ್ಯ ಪ್ರದೇಶವು ಹುಲಿಗಳು, ಚಿರತೆಗಳು, ಆನೆಗಳು, ಇಂಡಿಯನ್ ಗೌರ್‌ಗಳು, ಕರಡಿಗಳು ಹಾಗೂ ಇತರೆ ಪ್ರಾಣಿಗಳಿಗೆ ನೆಲೆವೀಡಾಗಿದೆ. ಪ್ರವಾಸಿಗರು ಪ್ರಕೃತಿಯ ನಡುವೆ ವಿಶ್ರಾಂತಿ ಪಡೆಯಲು ಮತ್ತು ರೋಚಕ ಸಫಾರಿಯನ್ನು ಕೈಗೊಳ್ಳಲು ಬಯಸುವವರಿಗೆ ಕಬಿನಿ ಹಿನ್ನೀರು ಸೂಕ್ತವಾದ ತಾಣವಾಗಿದೆ. ಶಾಂತವಾದ ದೋಣಿ ವಿಹಾರ ನದಿಯ ಪ್ರಶಾಂತತೆಯ ಉತ್ಕಟ ಅನುಭವ ಕಟ್ಟಿಕೊಡುತ್ತದೆ ಮತ್ತು ಸುತ್ತಲಿನ ಭೂಮಿಯ ಚಿತ್ರಣ ಅದರ ಸುತ್ತುವರಿದ ಬೆಟ್ಟಗಳು ಮತ್ತು ಹಸಿರು ಕಾಡುಗಳನ್ನು ನೋಡಿದರೆ ಛಾಯಾಗ್ರಾಹಕನ ಕನಸನ್ನು ಸಹಕಾರಗೊಳಿಸುತ್ತದೆ. ಕಬಿನಿ ಹಿನ್ನೀರಿನ ಮೇಲೆ ಸೂರ್ಯ ಮುಳುಗುತ್ತಿದ್ದಂತೆ, ಇಡೀ ಪ್ರದೇಶವು ರಂಗಿನ ಬಣ್ಣಗಳ ತಟ್ಟೆ (ಪ್ಯಾಲೆಟ್) ಆಗಿ ರೂಪಾಂತರಗೊಂಡು ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.
Trip Highlights
- Kabini Dam