Overview
Rail Museum, District: Mysuru
The Rail Museum in Mysuru is an interesting attraction of Mysuru that offers a glimpse into India’s rich rail heritage. Established in 1979, it is one of the earliest railway museums in the country, showcasing an extensive collection of vintage locomotives, carriages, and artefacts. Located near the Mysore railway station, the museum provides an enriching and unique experience for history buffs, train enthusiasts, and others. The museum showcases the genesis and growth of the Indian Railways through a gallery of photographs. Among its highlights is the Maharani Saloon Carriage, once used by the royal family of Mysuru. This opulent coach offers a peek into the luxurious travel of a bygone era, complete with elegant interiors and personal amenities. Another fascinating exhibit is the steam locomotive collection, where visitors can marvel at the engineering marvels that powered the country’s rail network in its early days. Another unique exhibit, not to be missed at the Rail Museum is the Austin Railway Car. Originally a motor car, it was redesigned as a rail car. The museum also houses a gallery featuring photographs and memorabilia that narrate the evolution of the Indian Railways. The outdoor exhibits include engines, coaches, and signal systems, allowing visitors to explore and appreciate the mechanics of rail travel. For children, a mini-train ride around the museum premises adds an element of fun and excitement. What sets the Rail Museum apart is its ability to blend nostalgia with education, making it a memorable visit for all age groups.
ರೈಲು ಸಂಗ್ರಹಾಲಯ, ಜಿಲ್ಲೆ: ಮೈಸೂರು
ಮೈಸೂರಿನಲ್ಲಿರುವ ರೈಲು ವಸ್ತು ಸಂಗ್ರಹಾಲಯವು ಮೈಸೂರಿನ ಆಸಕ್ತಿದಾಯಕ ಆಕರ್ಷಣೆಯಾಗಿದ್ದು, ಇದು ಭಾರತದ ಶ್ರೀಮಂತ ರೈಲು ಪರಂಪರೆಯ ಒಂದು ನೋಟವನ್ನು ನೀಡುತ್ತದೆ. 1979ರಲ್ಲಿ ಸ್ಥಾಪನೆಯಾದ ಇದು ವಿಂಟೇಜ್ ಲೋಕೋಮೋಟಿವ್‌ಗಳು, ರೈಲು ಗಾಡಿಗಳು ಮತ್ತು ಕಲಾಕೃತಿಗಳ ವ್ಯಾಪಕ ಸಂಗ್ರಹವನ್ನು ಪ್ರದರ್ಶಿಸುವ ದೇಶದ ರೈಲ್ವೆ ವಸ್ತುಸಂಗ್ರಹಾಲಯಗಳಲ್ಲಿ ಒಂದಾಗಿದೆ. ಮೈಸೂರು ರೈಲ್ವೆ ನಿಲ್ದಾಣದ ಬಳಿ ಇರುವ ಈ ವಸ್ತುಸಂಗ್ರಹಾಲಯವು ಇತಿಹಾಸ ಪ್ರಿಯರು, ರೈಲು ಉತ್ಸಾಹಿಗಳು ಮತ್ತು ಇತರರಿಗೆ ಶ್ರೀಮಂತ ಮತ್ತು ಅನನ್ಯ ಅನುಭವವನ್ನು ಕಟ್ಟಿಕೊಡುತ್ತದೆ. ಈ ವಸ್ತು ಸಂಗ್ರಹಾಲಯವು ಭಾರತೀಯ ರೈಲ್ವೆಯ ಮೂಲ ಮತ್ತು ಬೆಳವಣಿಗೆಯನ್ನು ಛಾಯಾಚಿತ್ರಗಳ ಗ್ಯಾಲರಿಯ ಮೂಲಕ ಪ್ರದರ್ಶಿಸುತ್ತದೆ. ಮೈಸೂರು ರಾಜಮನೆತನದವರು ಈ ಹಿಂದೆ ಬಳಸುತ್ತಿದ್ದ ಮಹಾರಾಣಿ ಸಲೂನ್ ಕ್ಯಾರೇಜ್ ಅದರ ಮುಖ್ಯ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಶ್ರೀಮಂತ ಬೋಗಿ ಸೊಗಸಾದ ಒಳಾಂಗಣಗಳು ಮತ್ತು ವೈಯಕ್ತಿಕ ಸೌಕರ್ಯಗಳೊಂದಿಗೆ ಸಂಪೂರ್ಣ ಚಿತ್ರಣ ನೀಡುವ ಮೂಲಕ ಹಿಂದಿನ ಕಾಲದ ಐಷಾರಾಮಿ ಪ್ರಯಾಣದ ಇಣುಕು ನೋಟವನ್ನು ಒದಗಿಸುತ್ತದೆ. ಮತ್ತೊಂದು ಆಕರ್ಷಕ ಪ್ರದರ್ಶನವು ಉಗಿ ಬಂಡಿ (ಸ್ಟೀಮ್ ಲೊಕೊಮೊಟಿವ್) ಸಂಗ್ರಹವಾಗಿದೆ. ಇಲ್ಲಿಗೆ ಭೇಟಿ ನೀಡುವವರು ರೈಲು ಸೇವೆಯ ಆರಂಭಿಕ ದಿನಗಳಲ್ಲಿನ ದೇಶದ ರೈಲು ಜಾಲಕ್ಕೆ ಶಕ್ತಿ ತುಂಬಿದ ತಂತ್ರಜ್ಞಾನದ ಅದ್ಭುತಗಳನ್ನು ಕಾಣಬಹುದು. ರೈಲ್ವೆ ಮ್ಯೂಸಿಯಂನಲ್ಲಿ ಪ್ರವಾಸಿಗರು ನೋಡಲೇಬೇಕಾದ ಮತ್ತೊಂದು ವಿಶಿಷ್ಟ ಪ್ರದರ್ಶನವೆಂದರೆ ಆಸ್ಟಿನ್ ರೈಲ್ವೆ ಕಾರ್. ಮೂಲತಃ ಮೋಟಾರು ಕಾರು, ಇದನ್ನು ರೈಲ್ ಕಾರ್ (ರೈಲು ಬೋಗಿ) ಯಾಗಿ ಮರು ವಿನ್ಯಾಸಗೊಳಿಸಲಾಯಿತು. ವಸ್ತು ಸಂಗ್ರಹಾಲಯವು ಭಾರತೀಯ ರೈಲ್ವೆಯ ವಿಕಾಸವನ್ನು ವಿವರಿಸುವ ಛಾಯಾಚಿತ್ರಗಳು ಮತ್ತು ಸ್ಮರಣಿಕೆಗಳನ್ನು ಒಳಗೊಂಡಿರುವ ಗ್ಯಾಲರಿಯನ್ನು ಸಹ ಒಳಗೊಂಡಿದೆ. ಹೊರಾಂಗಣ ಪ್ರದರ್ಶನಗಳಲ್ಲಿ ಇಂಜಿನ್‌ಗಳು, ಬೋಗಿಗಳು ಮತ್ತು ಸಿಗ್ನಲ್ ಸಿಸ್ಟಮ್‌ಗಳು ಸೇರಿವೆ. ವೀಕ್ಷಕರು ರೈಲು ಪ್ರಯಾಣದ ಯಂತ್ರ ಶಾಸ್ತ್ರವನ್ನು ಅನ್ವೇಷಿಸಲು ಮತ್ತು ಪ್ರಶಂಸಿಸಲು ಅನುವು ಮಾಡಿಕೊಡುತ್ತದೆ. ಪ್ರವಾಸಿಗರಿಗಾಗಿ ಮ್ಯೂಸಿಯಂ ಆವರಣದ ಸುತ್ತಲಿನ ಪುಟಾಣಿ ರೈಲು (ಟಾಯ್ ಟ್ರೈನ್) ಸವಾರಿಯು ವಿನೋದ ಮತ್ತು ಉತ್ಸಾಹವನ್ನು ಹೆಚ್ಚಿಸುತ್ತದೆ. ರೈಲು ವಸ್ತು ಸಂಗ್ರಹಾಲಯವನ್ನು ಶಿಕ್ಷಣದೊಂದಿಗೆ ಸಂಬಂಧ ಬೆಸೆಯುವ ಭಾವನೆಗಳನ್ನು ಸಂಯೋಜಿಸುವ ಸಾಮರ್ಥ್ಯವು ವಿಭಿನ್ನವಾಗಿದೆ. ಇದು ಎಲ್ಲಾ ವಯೋಮಾನದವರಿಗೆ ಸ್ಮರಣೀಯ ಭೇಟಿಯ ಅನುಭವವನ್ನು ಕಟ್ಟಿಕೊಡುತ್ತದೆ.