Overview
Shukhavana, Sri Ganapathy Sachchidananda Ashrama – Avadhoota Datta Peetham, District: Mysuru
Nestled within the tranquil precincts of Mysore’s Avadhoota Datta Peetham, Shukavana is a unique bird sanctuary dedicated to parrots. Established by Sri Ganapathy Sachchidananda Swamiji, the sanctuary is not just a haven for birds but also underlines the spiritual and ecological importance of conserving bird life. What makes Shukavana extraordinary is its diverse collection of over 2000 parrots, representing more than 450 species from around the globe. From the colourful Macaws of South America to the intelligent African Grey Parrots, each bird here adds a touch of vibrancy and wonder. The sanctuary is designed to provide a natural habitat for these birds while ensuring they receive the utmost care. Shukavana also holds a special place in spiritual traditions. The Swamiji believes that parrots are messengers of peace and harmony, and the sanctuary serves as a place for individuals to connect with these creatures on a deeper level. Visitors can experience the joy of feeding and interacting with the birds, a rare opportunity to observe their behaviour up close. A visit to Shukavana is not only a treat for bird enthusiasts but also an educational experience, teaching the importance of preserving biodiversity. The sanctuary’s vibrant colours, coupled with the soothing chirps of the parrots, create an atmosphere of serenity and joy.
ಶುಕವನ, ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ- ಅವಧೂತ ದತ್ತ ಪೀಠ, ಜಿಲ್ಲೆ: ಮೈಸೂರು
ಮೈಸೂರಿನ ಅವಧೂತ ದತ್ತ ಪೀಠದ ಪ್ರಶಾಂತ ವಾತಾವರಣದ ಶುಕವನದಲ್ಲಿ ನೆಲೆಸಿರುವ ವಿವಿಧ ಪ್ರಭೇದದ ಗಿಳಿಗಳಿಗೆ ಮೀಸಲಾಗಿರುವ ಧಾಮವಾಗಿದೆ. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿರವರು ಸ್ಥಾಪಿಸಿರುವ ಈ ಶುಕವನವು ಗಿಳಿಗಳನ್ನು ಸಂರಕ್ಷಿಸುವ ಆಧ್ಯಾತ್ಮಿಕ ಮತ್ತು ಪರಿಸರ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ. ಇದು ಜಗತ್ತಿನಾದ್ಯಂತ ದಕ್ಷಿಣ ಅಮೆರಿಕಾದ ವರ್ಣರಂಜಿತ ಮಕಾವ್‌ಗಳಿಂದ ಹಿಡಿದು ಬುದ್ಧಿವಂತ ಆಫ್ರಿಕನ್ ಗ್ರೇ ಗಿಳಿಗಳಂತಹ 450ಕ್ಕೂ ಹೆಚ್ಚಿನ ಜಾತಿಗಳನ್ನು ಹೊಂದಿರುವ 2000ಕ್ಕೂ ಅಧಿಕ ಗಿಳಿಗಳಿರುವ ವೈವಿಧ್ಯಮಯ ಸಂಗ್ರಹವಾಗಿದೆ. ಈ ಗಿಳಿಗಳಿಗೆ ನೈಸರ್ಗಿಕವಾದಂತಹ ವಸತಿಗಳನ್ನು ವಿನ್ಯಾಸಗೊಳಿಸಲಾಗಿದೆ. ಆಧ್ಯಾತ್ಮಿಕ ಪರಂಪರೆಗಳಲ್ಲಿ ಶುಕವನವು ವಿಶೇಷ ಸ್ಥಾನವನ್ನು ಹೊಂದಿದೆ. ಗಿಳಿಗಳು ಶಾಂತಿ ಮತ್ತು ಸಾಮರಸ್ಯದ ಸಂದೇಶವಾಹಕರು ಎಂದು ಸ್ವಾಮೀಜಿಗಳು ಹಾಗೂ ಅನುಯಾಯಿಗಳು ನಂಬುತ್ತಾರೆ. ಗಿಳಿಗಳಿಗೆ ಆಹಾರ ನೀಡುವ ಮತ್ತು ಸಂವಹನ ನಡೆಸುವ ಸಂತೋಷವನ್ನು ಪ್ರವಾಸಿಗರು ಅನುಭವಿಸಬಹುದು. ಇವುಗಳ ಚಟುವಟಿಕೆಗಳನ್ನು ಹತ್ತಿರದಿಂದ ವೀಕ್ಷಿಸಲು ಅಪರೂಪದ ಅವಕಾಶವಿದೆ. ಶುಕವನಕ್ಕೆ ಭೇಟಿ ನೀಡುವುದು ಪಕ್ಷಿ ಉತ್ಸಾಹಿಗಳಿಗೆ ಮಾತ್ರವಲ್ಲದೆ ಶೈಕ್ಷಣಿಕ ಮತ್ತು ಪರಿಸರ ಪ್ರವಾಸೋದ್ಯಮದ ಅನುಭವನ್ನು ಸಹ ನೀಡುತ್ತದೆ. ಶುಕವನದಲ್ಲಿ ಗಮನಸೆಳೆಯುವ ಬಣ್ಣದ ಗಿಳಿಗಳು ಹಿತವಾದ ಚಿಲಿಪಿಲಿಯೊಂದಿಗೆ ಪ್ರಶಾಂತ ಮತ್ತು ಸಂತೋಷದ ವಾತಾವರಣವನ್ನು ಸೃಷ್ಟಿಸಿರುತ್ತದೆ.