Overview
Shri Vaidhyanatheshwaraswamy and Group of Temple’s, Talakadu, Taluk: T.Narasipura District: MysuruTalakadu, a quaint town nestled along the banks of the Kaveri River, is a destination steeped in mystery, history, and spirituality. Renowned for its sprawling sand dunes and ancient temples, Talakadu is a treasure trove for history buffs and pilgrims alike. According to legend, Talakadu is named after twin brothers Tala and Kada. The place was once home to more than 30 temples, most of which lie buried under the sand today. It was once the capital of the Ganga dynasty far back in the 6th century, and known variously as Gajaranya, and Talavanapura. The town’s fascinating history is intertwined with the legendary Curse of Talakadu, said to have been placed by Queen Alamelamma in the 17th century, leading to the region’s transformation into a sandy desert. Despite this, Talakadu remains a significant pilgrimage site, home to the famous Panchalinga Temples dedicated to Lord Shiva-Vaidyanatheshwara, Arkeshwara, Pataleshwara, Maruleshwara, and Mallikarjuna. These temples are visited as part of the sacred Panchalinga Darshana, a ritual held once every 12 years. Talakadu offers a unique blend of spirituality and natural beauty. The Vaidyanatheshwara Temple is an architectural marvel and is believed to be a Chola structure. The Kirthinarayana Temple is believed to have been built by the Hoysala King Vishnuvardhana in 1116 AD to commemorate his victory over the Cholas. Surrounding the temples, the vast expanse of sand dunes gives the town its otherworldly charm, often earning it the nickname “Desert of Karnataka.” For nature enthusiasts, the tranquil Cauvery River provides an ideal spot for picnics and boating, while history lovers can explore the intriguing ruins and buried secrets of the past. Talakadu is a perfect destination for those seeking a blend of adventure, spirituality, and history.
ಶ್ರೀ ವೈದ್ಯನಾಥೇಶ್ವರಸ್ವಾಮಿ ಮತ್ತು ಸಮೂಹ ದೇವಾಲಯಗಳು, ತಲಕಾಡು, ತಾಲ್ಲೂಕು: ತಿ. ನರಸೀಪುರ, ಜಿಲ್ಲೆ: ಮೈಸೂರುತಲಕಾಡು, ಕಾವೇರಿ ನದಿಯ ದಡದಲ್ಲಿ ನೆಲೆಸಿರುವ ಒಂದು ವಿಶಿಷ್ಟ ಪಟ್ಟಣವಾಗಿದ್ದು, ನಿಗೂಢತೆ ಇತಿಹಾಸ ಮತ್ತು ಆಧ್ಯಾತ್ಮಿಕತೆಯಲ್ಲಿ ಮುಳುಗಿರುವ ತಾಣವಾಗಿದೆ. ವಿಶಾಲವಾದ ಮರಳು ದಿಬ್ಬಗಳು ಮತ್ತು ಪುರಾತನ ದೇವಾಲಯಗಳಿಗೆ ಹೆಸರುವಾಸಿಯಾದ ತಲಕಾಡು ಇತಿಹಾಸ ಪ್ರಿಯರಿಗೆ ಮತ್ತು ಪ್ರವಾಸಿಗರಿಗೆ ನೆಚ್ಚಿನ ತಾಣವಾಗಿದೆ. ದಂತಕಥೆಯ ಪ್ರಕಾರ, ತಲಕಾಡು ಅವಳಿ ಸಹೋದರರಾದ “ತಲಾ” ಮತ್ತು “ಕಾಡ” ಅವರ ಹೆಸರನ್ನು ಇಡಲಾಗಿದೆ. ಈ ಸ್ಥಳವು ಒಂದು ಕಾಲದಲ್ಲಿ 30 ಕ್ಕೂ ಅಧಿಕ ದೇವಾಲಯಗಳ ನೆಲೆವೀಡಾಗಿತ್ತು, ಅವುಗಳಲ್ಲಿ ಹೆಚ್ಚಿನವು ಇಂದು ಮರಳಿನಡಿಯಲ್ಲಿ ಹೂಳಲ್ಪಟ್ಟಿವೆ. ಇದು ಒಮ್ಮೆ 6ನೇ ಶತಮಾನದಲ್ಲಿ ಗಂಗ ರಾಜವಂಶದ ರಾಜಧಾನಿಯಾಗಿತ್ತು ಮತ್ತು ಇದನ್ನು ಗಜಾರಣ್ಯ ಮತ್ತು ತಲವನಪುರ ಎಂದು ಕರೆಯಲಾಗುತ್ತಿತ್ತು. ಪಟ್ಟಣದ ಆಕರ್ಷಕ ಇತಿಹಾಸವು ತಲಕಾಡಿನ ಪೌರಾಣಿಕ ಶಾಪದೊಂದಿಗೆ ಬೆಸೆದುಕೊಂಡಿದೆ. ಇದನ್ನು 17ನೇ ಶತಮಾನದಲ್ಲಿ ರಾಣಿ ಅಲಮೇಲಮ್ಮ ಹಾಕಿದ ಶಾಪದಿಂದ ಇಡೀ ಪ್ರದೇಶ ಮರಳಿನ ಮರುಭೂಮಿಯಾಗಿ ಪರಿವರ್ತನೆಯಾಯಿತು ಎಂದು ಹೇಳಲಾಗಿದೆ. ಇದರ ಹೊರತಾಗಿಯೂ, ತಲಕಾಡು ಮಹತ್ವದ ಯಾತ್ರಾಸ್ಥಳವಾಗಿ ಉಳಿದಿದೆ. ಶಿವನಿಗೆ ಮೀಸಲಾದ ಪ್ರಸಿದ್ಧ ಪಂಚಲಿಂಗ ದೇವಾಲಯಗಳು – ವೈದ್ಯನಾಥೇಶ್ವರ, ಅರ್ಕೇಶ್ವರ, ಪಾತಾಳೇಶ್ವರ, ಮರುಳೇಶ್ವರ ಮತ್ತು ಮಲ್ಲಿಕಾರ್ಜುನ. ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಪವಿತ್ರ ಪಂಚಲಿಂಗ ದರ್ಶನದ ಭಾಗವಾಗಿ ಈ ದೇವಾಲಯಗಳಿಗೆ ಭೇಟಿ ನೀಡಲಾಗುತ್ತದೆ. ತಲಕಾಡು ಆಧ್ಯಾತ್ಮಿಕತೆ ಮತ್ತು ನೈಸರ್ಗಿಕ ಸೌಂದರ್ಯದ ಅನನ್ಯ ಸಮ್ಮಿಶ್ರವಾಗಿದೆ. ವೈದ್ಯನಾಥೇಶ್ವರ ದೇವಾಲಯವು ವಾಸ್ತುಶಿಲ್ಪದ ಅದ್ಭುತವಾಗಿದೆ ಮತ್ತು ಇದು ಚೋಳರ ರಚನೆ ಎಂದು ನಂಬಲಾಗಿದೆ. ಕೀರ್ತಿನಾರಾಯಣ ದೇವಾಲಯವನ್ನು ಹೊಯ್ಸಳ ರಾಜ ವಿಷ್ಣುವರ್ಧನನು ಕ್ರಿ.ಶ. 1116 ರಲ್ಲಿ ಚೋಳರ ಮೇಲಿನ ವಿಜಯದ ನೆನಪಿಗಾಗಿ ನಿರ್ಮಿಸಲಾಗಿದೆ. ದೇವಾಲಯಗಳನ್ನು ಸುತ್ತುವರೆದಿರುವ, ವಿಶಾಲವಾದ ಮರಳು ದಿಬ್ಬಗಳು ಪಟ್ಟಣಕ್ಕೆ ಅದರ ಪಾರಮಾರ್ಥಿಕ ಆಕರ್ಷಣೆಯನ್ನು ನೀಡುತ್ತದೆ. ಹಾಗಾಗಿ ಇದು “ಕರ್ನಾಟಕದ ಮರುಭೂಮಿ” ಎಂಬ ಅಡ್ಡ ಹೆಸರನ್ನು ಹೊಂದಿದೆ. ಪ್ರಕೃತಿಯ ಉತ್ಸಾಹಿಗಳಿಗೆ, ಪ್ರಶಾಂತವಾದ ಕಾವೇರಿ ನದಿಯು ಪ್ರವಾಸಕ್ಕೆ ಮತ್ತು ದೋಣಿ ವಿಹಾರಕ್ಕೆ ಸೂಕ್ತವಾದ ಸ್ಥಳವಾಗಿದೆ. ಇತಿಹಾಸ ಪ್ರಿಯರು ಹಿಂದಿನ ಕುತೂಹಲಕಾರಿ ಅವಶೇಷಗಳ ರಹಸ್ಯಗಳನ್ನು ಅನ್ವೇಷಿಸಬಹುದು. ಸಾಹಸ, ಆಧ್ಯಾತ್ಮಿಕತೆ ಮತ್ತು ಇತಿಹಾಸದ ಆಸಕ್ತರಿಗೆ ತಲಕಾಡು ಒಂದು ಪರಿಪೂರ್ಣ ತಾಣವಾಗಿದೆ.
Trip Highlights
- Temple Visits: Explore the unique sand-enveloped temples and admire their architectural beauty.
- Archaeological Exploration: Learn about the historical significance and legends associated with Talakadu.
- Picnicking: Enjoy a leisurely picnic by the riverbanks amidst serene surroundings.
- River Activities: Engage in boating or take a stroll along the Cauvery River.